ಶಿಬಿರಗಳ ಸಮಾರೋಪ ಸಮಾರಂಭ

ಶಿಬಿರಗಳ ಸಮಾರೋಪ ಸಮಾರಂಭ: ಕ್ರೀಡೆಗೆ ವಿಶೇಷ ಆದ್ಯತೆ ಲಭ್ಯವಾಗುತ್ತಿದ್ದು, ಶ್ರದ್ದೆ ಮತ್ತು ಬದ್ಧತೆಯಿಂದ ಕ್ರೀಡಾ ತರಬೇತಿ ಪಡೆದು ಉತ್ತಮ ಕ್ರೀಡಾಪಟುಗಳಾಗಬೇಕೆಂದು ಮಂಗಳೂರು ವಿ. ವಿ. ಯ ಕ್ರೀಡಾ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಹರಿದಾಸ್ ಕೂಳೂರು ನುಡಿದಿದ್ದಾರೆ. ಅವರು ಮಂಗಳೂರು ವಿ. ವಿ. ದ ಕ್ರೀಡಾ ವಿಭಾಗ ಹಾಗೂ ಗೋವಿಂದ ದಾಸ ಕಾಲೇಜಿನ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾದ ಒಂದು ತಿಂಗಳ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರ ಹಾಗೂ ಸುರತ್ಕಲ್ ಸ್ಪೋಟ್ರ್ಸ್ ಅಕಾಡೆಮಿ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ ತ್ರೋಬಾಲ್ ಮತ್ತು ಕ್ರಿಕೇಟ್ ತರಬೇತಿ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ವಿತರಿಸಿ ಮಾಡನಾಡಿದರು.

ಮಂಗಳೂರು ವಿ.ವಿ ಯು ಈ ಬಾರಿ ವಿವಿಧೆಡೆ ಕ್ರೀಡಾ ತರಬೇತಿ ಶಿಬಿರಗಳನ್ನು ನಡೆಸಿದ್ದು, ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಸುರತ್ಕಲ್ ಹಳೆಯಂಗಡಿ ಲಯನ್ಸ್ ಕ್ಲಬ್‍ನ ಸ್ಥಾಪಕ ಅಧ್ಯಕ್ಷ ಚಂದ್ರ ಶೇಖರ್ ನಾನಿಲ್ ಮಾತನಾಡಿ ಸೇವಾ ಸಂಸ್ಥೆಗಳು ಕ್ರೀಡಾಪಟು ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದು ಕೊಳ್ಳ ಬೇಕೆಂದರು.

ಅಕ್ಷರ ಕೋಚಿಂಗ್ ಸೆಂಟರ್‍ನ ಮುಖ್ಯಸ್ಥ ಪೃಥ್ವೀರಾಜ್ ಹಾಗೂ ಹಳೆಯಂಗಡಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ವಾಸುದೇವ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ ಕಾಲೇಜು ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ಉತ್ತಮ ತರಬೇತಿ ಪಡೆದು ಶ್ರೇಷ್ಠ ಕ್ರೀಡಾಳುಗಳಾಗ ಬೇಕೆಂದರು.

ಸುರತ್ಕಲ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಎಡ್ವಿನ್ ಚಾಲ್ರ್ಸ್ ಉಪಸ್ಥತರಿದ್ದರು. ಕ್ರೀಡಾ ಶಿಕ್ಷಣ ನಿರ್ದೇಶಕ ಉದಯಕುಮಾರ್, ಗೋವಿಂದ ದಾಸ ಕಾಲೇಜಿನ ಕ್ರೀಡಾ ನಿರ್ದೇಶಕ ಹರೀಶ್ ಕುಮಾರ್, ಕ್ರೀಡಾ ತರಬೇತುಗಾರರಾದ ಸುಜೀತ್, ವಿನೋದ್ ಸಸಿಹಿತ್ಲು, ಜಮುನಾಸಿಂಗ್, ಸಂದೀಪ್ ಕಡಂಬೋಡಿ, ಸಾದಿಕ್ ಕುಳಾಯಿ, ರಾಕೇಶ್ ಹೊಸಬೆಟ್ಟು ತರಬೇತುದಾರರಾಗಿ ಮಾರ್ಗದರ್ಶನ ನೀಡಿದರು.

ನಿಖಿಲ್ ಸ್ವಾಗತಿಸಿದರು. ಕ್ರೀಡಾ ಶಿಕ್ಷಕ ವಿನೋದ್ ಸಸಿಹಿತ್ಲು ಕಾರ್ಯಕ್ರಮ ಸಂಯೋಜಿಸಿದರು.

 

Share This Post: