ಡಾ.ವೈ ನಾಗೇಶ್ ಶಾಸ್ತ್ರಿದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ದ್ರಾವಿಡ ಸಂಸೃತಿ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ , ಹಂಪಿ. ಹಾಗೂ ಗೋವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ಡಾ.ವೈ ನಾಗೇಶ್ ಶಾಸ್ತ್ರಿದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು 28/3/2019 ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ರಮೇಶ್ ಅವರು ವಹಿಸಿದ್ದರು. ಸಂಚಾಲಕರಾದ ಡಾ.ಎ.ಸುಬ್ಬಣ್ಣ,ಪ್ರೊ.ಕೃಷ್ಣಮೂರ್ತಿ,ಪ್ರೊ.ರಮೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಧವಳಾ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಪುಂಡಿಕಾಯಿ ಗಣಪಯ್ಯ ಭಟ್ ಅವರು ಆಗಮಿಸಿದ್ದು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು.


Share This Post: