ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ ಅಧ್ಯಾಪಕಿ ದೀಪಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.