ನಿತ್ಯ ಬಳಕೆಯಲ್ಲಿ ನನ್ನ ಕನ್ನಡ – ಚಿಂತನ ಮಂಥನ(೨೭/೧೧/೨೦೨೧)

ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ಮಂಗಳೂರು ಮಂಗಳೂರು ಗೋವಿಂದ ದಾಸ ಕಾಲೇಗಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷೆಯ ಬಳಕೆ ಮತ್ತು ಪ್ರಚಾರದಲ್ಲಿ ನಮ್ಮ ‌ಪ್ರಯತ್ನದ ಬಗ್ಗೆ ಚಿಂತನ ಮಂಥನ ಕಾರ್‍ಯಕ್ರಮದಿನಾಂಕ ೨೭/೧೧/೨೦೨೧ ರಂದು  ನಡೆಸಲಾಯಿತು. ಕಾರ್‍ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಸ್ ಎಡಪಡಿತ್ತಾಯ ಅವರು ನಡೆಸಿದರು.ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರಾದ ಕವಿ ವಸಂತ ಕುಮಾರ್‍ ಪರ್ಲ ಕಾರ್‍ಯಕ್ರಮದ ಕುರಿತು ಪ್ರಸ್ತಾವನೆಯನ್ನು ನೀಡಿದರು.ಅಧ್ಯಕ್ಷತೆಯನ್ನು ಹಿಂದೂ ವಿದ್ಯದಾಯಿನಿ ಸಂಘದ ಅಧ್ಯಕ್ಷರಾದ ಇ.ಜನಾರ್ದನ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ,ಉಪಪ್ರಾಂಶುಪಾಲರಾದ ಪ್ರೊ.ರಮೇಶ ಭಟ್.ಎಸ್.ಜಿ ಉಪಸ್ಥಿತರಿದ್ದರು.
ಚಿಂತನ ಮಂಥನದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ೮ ಮಂದಿ ,ಉನ್ನತ ಶಿಕ್ಷಣವನ್ನು ಮಾಡುತ್ತಿರುವ ೨ ಹಾಗೂ ಗೋವಿಂದ ದಾಸ ಕಾಲೇಜಿನ ೫ ವಿದ್ಯಾರ್ಥಿಗಳು ತಮ್ಮ ವಿಚಾರ ಮಂಡನೆ ಮಾಡಿದರು. ಕಾರ್‍ಯಕ್ರಮದ ಕೊನೆಗೆ ಮಂಗಳೂರಿನ ರತ್ನಾವತಿ ಜೆ.ಬೈಕಾಡಿಯವರು ಕನ್ನಡ ಭಾವಗೀತೆಗಳನ್ನು ಹಾಡಿದರು null


Tags :
Share This Post: