ಕಾಲೇಜಿನ ಕುರಿತು

ಗೋವಿಂದ ದಾಸ ಕಾಲೇಜು, 1967 ರಲ್ಲಿ ಸ್ಥಾಪನೆಯಾಯಿತು  ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ನಿರ್ವಹಣೆ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ  ಪದವಿಯನ್ನು  ನೀಡುತ್ತಿದೆ. ಕಾಲೇಜು ನ್ಯಾಕ್ ‘ಬಿ ++’ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದಿದೆ. ಕಾಲೇಜು ಮತ್ತು ಇತರ ಸಹೋದರಿ ಸಂಸ್ಥೆಗಳನ್ನು ನಿರ್ವಹಿಸುವ ಹಿಂದೂ ವಿದ್ಯಾದಾಯಿನೀ ಸಂಘವನ್ನು 30-11-1916ರಂದು ಸ್ಥಾಪಿಸಲಾಯಿತುದೂರದೃಷ್ಟಿಯ ಶಿಕ್ಷಕರು ಮತ್ತು ಹಿತೈಷಿಗಳು ಶ್ರೀ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿದ್ಯಾದಾಯಿನೀ ಶಾಲೆಯನ್ನುಹಾಗೂವಿದ್ಯಾದಾಯಿನೀ ಪ್ರೌಢ ಶಾಲೆಯನ್ನು 1944 ರಲ್ಲಿ ಪ್ರಾರಂಭಿಸಿದರು.  ಮುಂದಿನ ಹಂತದಲ್ಲಿ ಗೋವಿಂದ ದಾಸ ಕಾಲೇಜು 1967 ರಲ್ಲಿ ಪ್ರಾರಂಭವಾಯಿತು.

ಮಾನವ ಮೌಲ್ಯಗಳು ಮತ್ತು ಸದ್ಗುಣಗಳಿಗೆ ಒತ್ತು ನೀಡುವ ಗುಣಮಟ್ಟದ ಶಿಕ್ಷಣದ ಮೂಲಕ ಯುವಜನರನ್ನು  ವೃತ್ತಿಜೀವನಕ್ಕೆ ಸಿದ್ಧಪಡಿಸುವ ಅತ್ಯುತ್ತಮ ಮಾರ್ಗವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ನಂಬಿದ್ದಾರೆ.

ದೃಷ್ಟಿಕೋನ

ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನವನ್ನು ನೀಡಿ ಅವರಲ್ಲಿ ಸ್ವ-ಸಾಮರ್ಥ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿ ಆ ಮೂಲಕ ವಿದ್ಯಾರ್ಥಿಗಳಲ್ಲಿ ಶ್ರೇಷ್ಠತೆ ಮತ್ತು ನಾಯಕತ್ವದ ಗುಣಮಟ್ಟವನ್ನು ಉತ್ತೇಜಿಸುವುದು.

ಧ್ಯೇಯ 

ಗೋವಿಂದ ದಾಸ ಕಾಲೇಜು ಈ ಕೆಳಗಿನ ಧ್ಯೇಯವನ್ನು ಹೊಂದಿದೆ.

  • ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು.
  • ಮಾನವೀಯ ಮೌಲ್ಯಗಳನ್ನು ವೃದ್ಧಿಸುವುದು.
  • ಕೌಶಲ್ಯಪೂರಿತ ಶಿಕ್ಷಣವನ್ನು ನೀಡುವುದು.
  • ಜವಾಬ್ದಾರಿಯುತ ಪೌರತ್ವವನ್ನು ಉತ್ತೇಜಿಸುವುದು.
  • ವೈಯಕ್ತಿಕ  ಕೌಶಲ್ಯಗಳನ್ನು ಗುರುತಿಸುವ ಮೂಲಕ ವಿದ್ಯಾರ್ಥಿಗಳನ್ನು ವೃತ್ತಿ ಜವಾಬ್ದಾರರನ್ನಾಗಿ  ಮಾಡುವುದು.
  • ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳ ನಡುವೆ ಪರಿಣಾಮಕಾರಿ ಸಂಬಂಧವನ್ನು ಬೆಳೆಸುವುದು.
  • ಹುಡುಗಿಯರ  ಶಿಕ್ಷಣಕ್ಕೆ ಆದ್ಯತೆ ನೀಡುವುದು.