ಡಾ.ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಡಾ.ಕೆ ಶಿವರಾಮ ಕಾರಂತ ಅಧ್ಯಯನ ಪೀಠ,ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಸಂದ್ಯಾಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ‘ ಶಿವರಾಮ ಕಾರಂತರ ಕೃತಿಗಳಲ್ಲಿ ಪ್ರಾದೇಶಿಕತ ಸಂಸ್ಕೃತಿ ‘ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಿದ್ದರು. ನಮ್ಮ ಕಾಲೇಜಿನ ಹಿತಾ ಉಮೇಶ್(ಪ್ರಥಮ ಬಿಕಾಂ) ,ಸ್ಮಿತಾ.ಸಿ(ಪ್ರಥಮ ಬಿ.ಎ) ,ಧನುಶ್ರೀ (ಪ್ರಥಮ ಬಿ.ಎ) ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸ್ಮಿತಾ.ಸಿ(ಪ್ರಥಮ ಬಿ.ಎ) ಪ್ರಥಮ ಬಹುಮಾನ ಹಾಗೂ ಧನುಶ್ರೀ (ಪ್ರಥಮ ಬಿ.ಎ) ತ್ರತೀಯ ಬಹುಮಾನ ಪಡೆದಿರುತ್ತಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಭಾಷಣ ಸ್ಪರ್ಧೆ(೧೦/೧೦/೨೦೨೨)
Posted 2 years ago / GDC UG