View Profile : Marcel Mascarenhas

Posts by  Marcel Mascarenhas

Premchand Diwas Celebration 2020

Posted 4 years ago / GDC UG

The Department of Hindi celebrated Premchand Diwas on 31 July 2020. The renowned writer Munshi Premchand’s contributions to the world of literature was commemorated on that day. The Principal Prof.Krishnamurthy P. presided over the function.

ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ

Posted 5 years ago / GDC UG

ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್‍ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ … Continue reading “ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ”

ಡಾ.ವೈ ನಾಗೇಶ್ ಶಾಸ್ತ್ರಿದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Posted 5 years ago / GDC UG

ದ್ರಾವಿಡ ಸಂಸೃತಿ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ , ಹಂಪಿ. ಹಾಗೂ ಗೋವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ಡಾ.ವೈ ನಾಗೇಶ್ ಶಾಸ್ತ್ರಿದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು 28/3/2019 ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ರಮೇಶ್ ಅವರು ವಹಿಸಿದ್ದರು. ಸಂಚಾಲಕರಾದ ಡಾ.ಎ.ಸುಬ್ಬಣ್ಣ,ಪ್ರೊ.ಕೃಷ್ಣಮೂರ್ತಿ,ಪ್ರೊ.ರಮೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಧವಳಾ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಪುಂಡಿಕಾಯಿ ಗಣಪಯ್ಯ ಭಟ್ ಅವರು ಆಗಮಿಸಿದ್ದು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಪಾತ್ರ ವಿಷಯದ … Continue reading “ಡಾ.ವೈ ನಾಗೇಶ್ ಶಾಸ್ತ್ರಿದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ”

ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

Posted 6 years ago / GDC UG

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃಧ್ಧಿ ಯೋಜನೆ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ,ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೋಲೀಸ್ ಠಾಣೆ ಹಾಗೂ ಗೊವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ಗಾಂಧೀ ಜಯಂತಿಯ ಪ್ರಯುಕ್ತ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ದಿನಾಂಕ 26/9/2018 ರಂದು ಏರ್ಪಡಿಸಲಾಗಿತ್ತು.ಸುಮಾರು 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶ್ರೀ ಮಹಾಬಲ ಚೌಟ ಅವರು ವಹಿಸಿದ್ದರು.ಪ್ರೊ ಕೃಷ್ಣಮೂರ್ತಿ ಮುಖ್ಯ … Continue reading “ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ”

ಕಾವ್ಯ ಚೈತ್ರ –ಕವಿಗೋಷ್ಟಿ

Posted 6 years ago / GDC UG

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಹಾಗೂ ಗೊವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ದಿನಾಂಕ 30/4/2018 ರಂದು ಕಾವ್ಯ ಚೈತ್ರ –ಕವಿಗೋಷ್ಟಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಮುರಳೀಧರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Posted 6 years ago / GDC UG

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಹಾಗೂ ಗೊವಿಂದ ದಾಸ ಕಾಲೇಜು ಕನ್ನಡ ವಿಭಾಗದ ಸಹಯೋಗದೊಂದಿಗೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 23/1/2018 ರಂದು ಕಾಲೇಜಿನಲ್ಲಿ ನಡೆಯಿತು.ಪ್ರೊ ಎಚ್.ರಾಮಚಂದ್ರ ಕೆದಿಲಾಯ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು.ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸೃತಿಕ ಕಾರ್ಯಕ್ರಮ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ವಜಯಲಕ್ಷ್ಮಿ ಶೆಟ್ಟಿ, ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಶ್ರೀ ಜನಾರ್ದನ್,ಕಾರ್ಯದರ್ಶಿ ಶ್ರೀ ವೆಂಕಟ್ರಾವ್ ಸಮ್ಮೇಳನದ ಸಂಚಾಲಕರಾದ … Continue reading “ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ”

ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18

Posted 6 years ago / GDC UG

ಡಾ.ಪಿ . ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ ವತಿಯಿಂದ ದಿನಾಂಕ 15/12/2017 ರಂದು ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18 ನಡೆಸಲಾಯಿತು. ಅಗರಿ ಶ್ರೀನಿವಾಸ ಭಾಗವತ ವಿಷಯದ ಕುರಿತು ಪ್ರೊ. ಶ್ರೀಧರ ಡಿ.ಎಸ್ ಕಿನ್ನಿಗೋಳಿಯವರು ಉಪನ್ಯಾಸ ನೀಡಿದರು