ವಿದ್ಯಾರ್ಥಿನಿ ನಿಲಯ

ಕೇಂದ್ರೀಕೃತ ಅಧ್ಯಯನಕ್ಕೆ ಅನುಕೂಲಕರವಾದ ವಾತಾವರಣವನ್ನು ಒದಗಿಸುವುದು ಮತ್ತು ಶಿಸ್ತು ಮತ್ತು ಸಹಕಾರದ ಜೀವನ ಶೈಲಿಯನ್ನು ಬೆಳೆಸುವುದು ಹಾಸ್ಟೆಲ್‌ನ ಪ್ರಾಥಮಿಕ ಉದ್ದೇಶವಾಗಿದೆ. ವಿದ್ಯಾರ್ಥಿನಿಯರಿಗೆ ಸುರಕ್ಷಿತ, ಅನುಕೂಲಕರವಾಗಿ ನೆಲೆಗೊಂಡಿರುವ ಹಾಸ್ಟೆಲ್ನಲ್ಲಿ ಶಿಸ್ತುಕ್ರಮವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ.ಅಭ್ಯಾಸಕ್ಕಾಗಿ ಸಮಯ ಮತ್ತು ಅಧ್ಯಯನದ ಸೂಕ್ತ ಅವಕಾಶ ಮಾಡಲಾಗುತ್ತದೆ. ಸಂದರ್ಶಕರಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಗದಿತ ಸಮಯ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸಂಜೆ 6.30 ರೊಳಗೆ ಹಾಸ್ಟೆಲ್‌ನಲ್ಲಿ ಮರು ಹಾಜರಾಗುವಂತೆ ತಿಳಿಸಲಾಗಿದೆ.

ನಿಗದಿತ ವೇಳೆಯಲ್ಲಿ ಸೌರ ಶಾಖೋತ್ಪಾದಕಗಳ ಮೂಲಕ ಬಿಸಿನೀರಿನ ಪೂರೈಕೆಯನ್ನು ಮತ್ತು ತಡೆರಹಿತ ಬೆಳಕಿನ ವ್ಯವಸ್ಥೆಯನ್ನು ಖಾತ್ರಿಪಡಿಸಲಾಗಿದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳು ಮತ್ತು ಓದುವ ಹಾಲ್ ಸಹ ಒದಗಿಸಲಾಗಿದೆ.

ಜವಾಬ್ದಾರಿಯುತ ವಾರ್ಡನ್‌ಗಳು ಮತ್ತು ಮೇಲ್ವಿಚಾರಣಾ ಸಿಬ್ಬಂದಿ ವಿದ್ಯಾರ್ಥಿನಿಯರ ರಕ್ಷಣೆ ಹಾಗೂ ಅವಶ್ಯಕತೆ ಕುರಿತು ಗಮನ
ಹರಿಸುತ್ತಾರೆ.ಮನೆ ವಾತಾವರಣ ಮೂಡಿಸಲು ವಿದ್ಯಾರ್ಥಿನಿಯರಿಗಾಗಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಕ್ರೀಡಾ ಸ್ಫರ್ಧೆ ನಡೆಸಿ ವಿಜೇತರ ಬಹುಮಾನವನ್ನು ಹಾಸ್ಟೆಲ್ ದಿನಾಚರಣೆಯಂದು ನೀಡಲಾಗುತ್ತದೆ ಹಾಗೂ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ಅಂದು ನೀಡುತ್ತಾರೆ.