ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

Posted 4 years ago / GDC UG

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃಧ್ಧಿ ಯೋಜನೆ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ,ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೋಲೀಸ್ ಠಾಣೆ ಹಾಗೂ ಗೊವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ಗಾಂಧೀ ಜಯಂತಿಯ ಪ್ರಯುಕ್ತ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ದಿನಾಂಕ 26/9/2018 ರಂದು ಏರ್ಪಡಿಸಲಾಗಿತ್ತು.ಸುಮಾರು 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶ್ರೀ ಮಹಾಬಲ ಚೌಟ ಅವರು ವಹಿಸಿದ್ದರು.ಪ್ರೊ ಕೃಷ್ಣಮೂರ್ತಿ ಮುಖ್ಯ … Continue reading “ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ”

ಕಾವ್ಯ ಚೈತ್ರ –ಕವಿಗೋಷ್ಟಿ

Posted 4 years ago / GDC UG

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಹಾಗೂ ಗೊವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ದಿನಾಂಕ 30/4/2018 ರಂದು ಕಾವ್ಯ ಚೈತ್ರ –ಕವಿಗೋಷ್ಟಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಮುರಳೀಧರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Posted 5 years ago / GDC UG

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಹಾಗೂ ಗೊವಿಂದ ದಾಸ ಕಾಲೇಜು ಕನ್ನಡ ವಿಭಾಗದ ಸಹಯೋಗದೊಂದಿಗೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 23/1/2018 ರಂದು ಕಾಲೇಜಿನಲ್ಲಿ ನಡೆಯಿತು.ಪ್ರೊ ಎಚ್.ರಾಮಚಂದ್ರ ಕೆದಿಲಾಯ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು.ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸೃತಿಕ ಕಾರ್ಯಕ್ರಮ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ವಜಯಲಕ್ಷ್ಮಿ ಶೆಟ್ಟಿ, ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಶ್ರೀ ಜನಾರ್ದನ್,ಕಾರ್ಯದರ್ಶಿ ಶ್ರೀ ವೆಂಕಟ್ರಾವ್ ಸಮ್ಮೇಳನದ ಸಂಚಾಲಕರಾದ … Continue reading “ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ”

ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18

Posted 5 years ago / GDC UG

ಡಾ.ಪಿ . ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ ವತಿಯಿಂದ ದಿನಾಂಕ 15/12/2017 ರಂದು ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18 ನಡೆಸಲಾಯಿತು. ಅಗರಿ ಶ್ರೀನಿವಾಸ ಭಾಗವತ ವಿಷಯದ ಕುರಿತು ಪ್ರೊ. ಶ್ರೀಧರ ಡಿ.ಎಸ್ ಕಿನ್ನಿಗೋಳಿಯವರು ಉಪನ್ಯಾಸ ನೀಡಿದರು

ಅಂಬಿಗರ ಚೌಡಯ್ಯನ ವಚನಗಳ ಗಾಯನ ಮತ್ತು ವ್ಯಾಖ್ಯಾನ 2017

Posted 5 years ago / GDC UG

ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ “ಅಂಬಿಗರ ಚೌಡಯ್ಯನ ವಚನಗಳ ಗಾಯನ ಮತ್ತು ವ್ಯಾಖ್ಯಾನ” ಕಾರ್ಯಕ್ರಮವನ್ನು ದಿನಂಕ 4.9.2017 ರಂದು ಆಯೋಜಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳಾದ ಶ್ರೀ ಶಿವರಾಜು ಹಾಗೂ ಕುಮಾರಿ ಶ್ರೀ ದೇವಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾ.ನಾಗಪ್ಪ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಮುರಳೀಧರ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.