ಪ್ರಾಂಶುಪಾಲರ ಸಂದೇಶ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು – ಭಾರತಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟ ದಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುವ ಮುನ್ನೋಟವನ್ನು ಹೊಂದಿದೆ.

ಉತ್ತಮಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗಳಿಗಾಗಿ ನಿರಂತರ ಹಾಗೂ ಸಮರ್ಥ ನೆಲೆಗಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಆಧುನಿಕಕಾಲ ಘಟ್ಟದಲ್ಲಿ ಉನ್ನತ ಶಿಕ್ಷಣವು ಸಾಂಪ್ರದಾಯಿಕ ಚೌಕಟ್ಟಿನ್ನು ತೊರೆದು ತಾಂತ್ರಿಕ ಕಾರ್ಯವಿಧಾನಗಳ ಮೂಲಕ ಕಲಿಕೆ ಹಾಗೂ ಉನ್ನತ ಕೌಶಲ ವರ್ಧನೆಯ ತಳಹದಿಯಲ್ಲಿ ಸಾಗಬೇಕಾಗಿದೆ.

ಪರಿಣಾಮಕಾರಿ ಬೋಧನಾಕ್ರಮದ ಅಭ್ಯಾಸಗಳೊಂದಿಗೆ ಪರಿಷ್ಕøತ – ಸುಧಾರಿತ ಕಲಿಕಾ ವಿಧಾನಗಳು ಹಾಗೂ ವ್ಯವಸ್ಥೆಗಳು ಅತೀಅಗತ್ಯ.ಇಂದಿನ ಪ್ರಕ್ಷುಬ್ಧ ಹಾಗೂ ಅತಂತ್ರತೆಯ ನಡುವೆಯೂ ನಿರಾಶರಾಗದೆ ಅಂತರ್‍ಜಾಲ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳಿಗೆ ಅಂತರ್‍ಜಾಲ ವ್ಯವಸ್ಥೆಯಲ್ಲಿ ಶಿಕ್ಷಣ ಮುಂದುವರಿಯುತ್ತಿದೆ.
ನೂತನ ಶಿಕ್ಷಣ ನೀತಿಯನ್ವಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದೆ.

ನಮ್ಯತೆ ಮತ್ತು ನೂತನ ಪರಿಕಲ್ಪನೆಗೆ ಅವಕಾಶ ಕಲ್ಪಿಸುವ ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಒತ್ತು ಸಿಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಂಶಗಳ ಮೌಲ್ಯಮಾಪನದೊಂದಿಗೆ ಸಮಗ್ರ ಸಾಮಥ್ರ್ಯ ಹಾಗೂ ಜೀವನ ಕೌಶಲಗಳ ಶಿಕ್ಷಣ ನೀಡುವ ವ್ಯವಸ್ಥೆಯಾಗುತ್ತಿದೆ.

ಪ್ರತಿಕೂಲ ವಾತಾವರಣದ ಒತ್ತಡದ ನಡುವೆಯೂ ಕಾಲೇಜಿನ ಚಟುವಟಿಕೆಗಳು ನಡೆಯುತ್ತಿದೆ. ಅಂತರ್‍ರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ ವೆಬಿನಾರ್‍ಗಳು, ಶಿಕ್ಷಕರ ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳ ವೃತ್ತಿ ಕೌಶಲ ಅಭಿವೃದ್ಧಿಯ ಅಧ್ಯಯನ ತರಬೇತಿಗಳು, ಅಂತರ್‍ಜಾಲ ನೆಲೆಯ ಸ್ಪರ್ಧೆಗಳು, ಸಾಂಸ್ಕøತಿಕ ಹಾಗೂ ಸಾಮಾಜಿಕ ಚಟುವಟಿಕೆಗಳು,ಅಂತರ್‍ಜಾಲ ಪುಸ್ತಕ ಪ್ರೀತಿ-ವೈವಿಧ್ಯಮಯ ಚಟುವಟಿಕೆಗಳು ನಡೆಯುತ್ತಿವೆ.

ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನದ ಸಂಯೋಜನೆ, ನಿರಂತರ ವೃತ್ತಿಪರ ಅಭಿವೃದ್ಧಿಗೆ ವಿವಿಧ ಅಂತರ್ಜಾಲ ಕಾರ್ಯಕ್ರಮಗಳು- ಪರಸ್ಪರ ಹಂಚುವಿಕೆಯ ಮೂಲಕ ನಡೆಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘ ಹಾಗೂ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್ ಸಮ ಪಾಲುದಾರ ಅಂಗಗಳಾಗಿದ್ದು ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಸಮಗ್ರ ಅಭಿವೃದ್ಧಿಯ ಮುನ್ನೋಟದೊಂದಿಗೆ ಕಾರ್ಯನಿರ್ವಹಿಸುವ ಬದ್ಧತೆ ನಮ್ಮದಾಗಿದೆ. ಅಲ್ಯುಮ್ನಿ ಅಸೋಸಿಯೇಶನ್, ಶಿಕ್ಷಕ ರಕ್ಷಕ ಸಂಘ, ಪ್ರಾಧ್ಯಾಪಕ ಸ್ನೇಹಿತರು ಹಾಗೂ ವಿದ್ಯಾಭಿಮಾನಿಗಳು ತಮ್ಮ ಸಹಾಯಹಸ್ತ ನೀಡಿದ್ದಾರೆ. ಅಲ್ಯುಮ್ನಿ ಅಸೋಸಿಯೇಶನ್ ಪೀಠೋಪಕರಣಗಳ ಕೊಡುಗೆ ಹಾಗೂ ಅಂತರ್‍ಜಾಲ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕ್ರಿಯಾಶೀಲ ಬೆಂಬಲ ನೀಡುತ್ತಿದೆ. ನಮ್ಮ ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನದಲ್ಲಿ ಸಾಂಘಿಕ ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಶೈಕ್ಷಣಿಕ ಉತ್ಕಷ್ಟ್ರತೆಯ ಶಿಕ್ಷಣ ಸಂಸ್ಥೆಯನ್ನಾಗಿಸುವಲ್ಲಿ ಪ್ರಾಮಾಣಿಕ ನಿರಂತರ ಪ್ರಯತ್ನ ನಡೆಸುತ್ತಿದೆ.