22-08-2025 ರಂದು ಸುರತ್ಕಲ್: ಗೋವಿಂದ ದಾಸ ಕಾಲೇಜು ಸುರತ್ಕಲ್ ನಲ್ಲಿ ಸಂಸ್ಕೃತೋತ್ಸವ ಆಚರಿಸಲಾಯಿತು. ಸಂಸ್ಕೃತ ಕುರಿತಾಗಿ ಎಲ್ಲಾ ಭಾಷೆಗಳು ಸಂಸ್ಕೃತದ ಬದಲಾವಣೆಗೆ ಮುಂದಾಗಿದ್ದರು ಸಂಸ್ಕೃತ ಎನ್ನುವಂತದ್ದು ತನ್ನ ಸ್ಥಿರತೆಯನ್ನು ಹಾಗೆಯೇ ಇಟ್ಟುಕೊಂಡಿದೆ ಸಂಸ್ಕೃತವು ಎಲ್ಲಾ ಭಾಷೆಗಳಿಗೆ ಮೂಲ. ಎಂಬುದಾಗಿ ಉಡುಪಿ ಸಂಸ್ಕೃತ ಕಾಲೇಜಿನ ಅಧ್ಯಾಪಕ ಅಮೃತೇಶ್ ಆಚಾರ್ಯ ಇವರು ಉಪನ್ಯಾಸವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ|ರಮೇಶ್ ಭಟ್, ಅಧ್ಯಕ್ಷರಾಗಿ ಕಾಲೇಜಿನ ಪ್ರಾಚಾರ್ಯ ಪ್ರೊ|ಹರೀಶ್ ಆಚಾರ್ಯ ಸಂಸ್ಕೃತ ವಿಭಾಗದ ಮುಖ್ಯಸ್ಥ ನಟರಾಜ ಜೋಶಿ ಹಾಗೂ ಅತಿಥಿ ಉಪನ್ಯಾಸಕ ಸಂದೀಪ ಆಚಾರ್ಯ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಿರುದ್ಧ ಮತ್ತು ಅನನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.



