ಸಂಸ್ಕೃತೋತ್ಸವ-2024

ದಿನಾಂಕ : 4-10-2024ರಂದು ಗೋವಿಂದದಾಸ ಮಹಾವಿದ್ಯಾಲಯದಲ್ಲಿ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ಪ್ರಾಧ್ಯಾಪಕರಾದ ಪ್ರೊ. ಷಣ್ಮುಖ ಹೆಬ್ಬಾರರು ಆಗಮಿಸಿ ಸಂಸ್ಕೃತ ಭಾಷೆಯ ಮಹತ್ವ, ಭಾಷೆಯ ರಕ್ಷಣೆ ಎಂಬ ವಿಚಾರದಲ್ಲಿ ಉಪನ್ಯಾಸವನ್ನು ನೀಡಿದರು. ಮತ್ತೋರ್ವ ಅತಿಥಿಗಳಾದ ಗೋವಿಂದದಾಸ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ  ಶ್ರೀಯುತ ವೆಂಕಟರಮಣ ಭಟ್ಟರು ಬರೀ ಉಡುಗೆ ತೊಡುಗೆಗಳಿಂದ ನಮ್ಮಲ್ಲಿ ಸಂಸ್ಕೃತಿ ಹುಟ್ಟಲಾರದು ನಮ್ಮ ಮನಸ್ಸಿಂದ ಸಂಸ್ಕೃತಿ ಹುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಬೋಧಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷರಾದ ಪ್ರೊ. ಕೃಷ್ಣಮೂರ್ತಿ ಅವರು ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ನೋಡಿ ಅಭಿನಂದಿಸಿದರು. ಸಂಸ್ಕೃತೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಯುತ ನಟರಾಜ ಜೋಶಿ ಅವರು ಸಂಸ್ಕೃತೋತ್ಸವದ ಪ್ರಾಸ್ತಾವಿಕ  ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತ-ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. ಅತಿಥಿ ಉಪನ್ಯಾಸಕರಾದ ಶ್ರೀಯುತ ಸಂದೀಪ ಆಚಾರ್ಯ ವಂದನಾರ್ಪಣೆ ಮಾಡಿದರು. ಅನನ್ಯ ರಾವ್ ಹಾಗೂ ತೇಜಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಿದ್ಯಾಲಯದ ಎಲ್ಲ  ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

 

Share This Post: