
ದಿನಾಂಕ : 4-10-2024ರಂದು ಗೋವಿಂದದಾಸ ಮಹಾವಿದ್ಯಾಲಯದಲ್ಲಿ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ಪ್ರಾಧ್ಯಾಪಕರಾದ ಪ್ರೊ. ಷಣ್ಮುಖ ಹೆಬ್ಬಾರರು ಆಗಮಿಸಿ ಸಂಸ್ಕೃತ ಭಾಷೆಯ ಮಹತ್ವ, ಭಾಷೆಯ ರಕ್ಷಣೆ ಎಂಬ ವಿಚಾರದಲ್ಲಿ ಉಪನ್ಯಾಸವನ್ನು ನೀಡಿದರು. ಮತ್ತೋರ್ವ ಅತಿಥಿಗಳಾದ ಗೋವಿಂದದಾಸ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಶ್ರೀಯುತ ವೆಂಕಟರಮಣ ಭಟ್ಟರು ಬರೀ ಉಡುಗೆ ತೊಡುಗೆಗಳಿಂದ ನಮ್ಮಲ್ಲಿ ಸಂಸ್ಕೃತಿ ಹುಟ್ಟಲಾರದು ನಮ್ಮ ಮನಸ್ಸಿಂದ ಸಂಸ್ಕೃತಿ ಹುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಬೋಧಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷರಾದ … Continue reading “ಸಂಸ್ಕೃತೋತ್ಸವ-2024”