Department of Kannada

 

1967 ನೇ ಇಸವಿಯಲ್ಲಿ ಗೋವಿಂದದಾಸ ಕಾಲೇಜು ಪ್ರಾರಂಭವಾಗಿ ಎಲ್ಲಾ ತರಗತಿಗಳಿಗೆ ಕನ್ನಡ ಭಾಷೆ ಹಾಗೂ ಇದರ ಜೊತೆಗೆ ಬಿ.ಎ ತರಗತಿಗೆ ಕನ್ನಡ ಐಚ್ಛಿಕ ವಿಷಯದ ಬೋಧನೆಯನ್ನು ಆರಂಭಿಸಲಾಯಿತು. ಕಾಲೇಜಿನ ಮೊದಲ ಕನ್ನಡ ಪ್ರ್ರಾಧ್ಯಾಪಕರಾಗಿ ಡಾ.ಹೊಸಬೆಟ್ಟು ಸೀತಾರಾಮ ಆಚಾರ್ಯ ಅವರು ನೇಮಕಗೊಂಡು. ಇವರು 1988ರಲ್ಲಿ ಪ್ರಾಂಶುಪಾಲರಾಗಿ 1990 ರಲ್ಲಿ ನಿವೃತ್ತರಾದರು. ಈ ಕಾಲಘಟ್ಟದಲ್ಲಿ ಶ್ರೀ ಶಂಕರನಾರಾಯಣ ಭಟ್ ಹಾಗೂ ಶ್ರೀಮತಿ ಲೀಲಾವತಿ ಎಸ್. ರಾವ್ ಕನ್ನಡ ಪ್ರಾಧ್ಯಾಪಕರಾಗಿದ್ದರು.
ಪ್ರಸ್ತುತ ಶ್ರೀ ಕೃಷ್ಣಮೂರ್ತಿ ಪಿ., ಶ್ರೀ ರಮೇಶ್ ಭಟ್ ಎಸ್. ಜಿ., ಶ್ರೀಮತಿ ದೀಪಾ ಇವರು ವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಮಧ್ಯಾವಧಿಯಲ್ಲಿ ಶ್ರೀಮತಿ ಸರಸ್ವತಿ, ಶ್ರೀಮತಿ ಮೋಹನಾ, ಶ್ರೀಮತಿ ಸುಧಾರಾಣಿ, ಶ್ರೀಮತಿ ಸುಜಾತಾ ರಾವ್ ಇವರು ವಿಭಾಗದ ಯಶಸ್ಸಿಗೆ ಶ್ರಮಿಸಿರುತ್ತಾರೆ. ವಿಭಾಗದಲ್ಲಿ ಡಾ.ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರವು *** ಪ್ರಾರಂಭವಾಗಿದ್ದು ಸುಮಾರು 1000 ಪುಸ್ತಕಗಳ ಗ್ರಂಥಾಲಯವನ್ನು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತಓದುಗರಿಗೆ ಅಧ್ಯಯನಕ್ಕಾಗಿ ಪುಸ್ತಕಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಹೆಚ್ಚಿಸಲು ಪಠ್ಯೇತರ ಚಟುವಟಿಕೆಯಾಗಿ ಪ್ರಬಂಧ, ಭಾಷಣ, ಆಶುಭಾಷಣ, ಕಥಾರಚನೆ, ಸ್ವರಚಿತಕವನ ಸ್ಪರ್ಧೆಗಳನ್ನು ವಿಭಾಗದಿಂದ ಆಯೋಜಿಸಲಾಗುತ್ತಿದೆ. ಅಂತರ್ ಕಾಲೇಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಕನ್ನಡ ಕವನ ಹಾಗೂ ಕಥಾರಚನಾ ಕಮ್ಮಟ, ತುಳುನಾಟಕರಚನಾ ಕಮ್ಮಟ, ಹಳೆಗನ್ನಡ ಕಾವ್ಯಗಳ ವಾಚನ ಮತ್ತು ಗಾಯನ ಕಮ್ಮಟವನ್ನು ವಿಭಾಗದಿಂದ ಆಯೋಜಿಸಲಾಗುತ್ತಿದೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು 1993 ಹಾಗೂ 2018 ರಲ್ಲಿ ಯಶಸ್ವಿಯಾಗಿ ಕಾಲೇಜಿನಲ್ಲಿ ಆಯೋಜಿಸಿರುತ್ತೇವೆ. ಆಸಕ್ತ ವಿದ್ಯಾರ್ಥಿಗಳಿಗೆ ನುಡಿ ಹಾಗೂ ಬರಹ ಲಿಪಿಗಳ ಬೆರಳಚ್ಚು ಹೇಳಿಕೊಡಲಾಗುತ್ತಿದೆ.